ಸದ್ಯ ಮಾರುಕಟ್ಟೆಯಲ್ಲಿರುವ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ 312 ಕಿ.ಮೀ. ಅಲ್ಟ್ರೋಜ್ ಬಿಡುಗಡೆಯಾಗುವ ವೇಳೆ ನೆಕ್ಸಾನ್ ಕಾರಿನ ಮೈಲೇಜ್ ಕೂಡ ಅಪ್‌ಗ್ರೇಡ್ ಮಾಡಲು ಟಾಟಾ ಮುಂದಾಗಿದೆ. ಈ ಮೂಲಕ ಟಾಟಾ ಕಾರು ಕೂಡ ದುಬಾರಿ ಎಲೆಕ್ಟ್ರಿಕ್ ಕಾರುಗಳಂತೆ 500 ಕಿ.ಮೀ ಮೈಲೇಜ್ ನೀಡಲಿದೆ.ಸರ್ಕಾರದಿಂದ ಭರ್ಜರಿ ಆಫರ್; ಟಾಟಾ ನೆಕ್ಸಾನ್, ಟಿಗೋರ್ ಎಲೆಕ್ಟ್ರಿಕ್ ಕಾರಿನ ಮೇಲೆ 3 ಲಕ್ಷ ರೂ ಡಿಸ್ಕೌಂಟ್!ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಬೆಲೆ 12 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. ಕೇಂದ್ರ ಸರ್ಕಾರದ FEMA ಯೋಜನೆಯಡಿ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ 10 ಲಕ್ಷ ರೂಪಾಯಿ ಆಗಲಿದೆ. ಭಾರತದಲ್ಲಿ ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಗರಿಷ್ಠ ಸುರಕ್ಷತೆಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಸಂಚಲನ ಸೃಷ್ಟಿಸಿದ್ದ ಟಾಟಾ ಇದೀಗ, ಅಲ್ಟ್ರೋಜ್ ಮೂಲಕ ದೇಶದ ಎಲೆಕ್ಟ್ರಿಕ್ ಮಾರುಕಟ್ಟೆ ಸಂಪೂರ್ಣ ಆಕ್ರಮಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.