ಭೂಮಿ ಇದ್ರೆ ನಮ್ಮ ಮಕ್ಕಳು, ಮೊಮ್ಮಕ್ಕಳು ಯಾರ ಹಂಗಿಲ್ಲದೆ ಅಲ್ಪ ಸ್ವಲ್ಪ ಬೆಳೆ ಬೆಳೆದು ನೆಮ್ಮದಿಯ ಜೀವನ ಸಾಗಿಸ್ತಾರೆ. ಹೀಗಾಗಿ, ಇಲ್ಲಿ ಒಂದು ವೇಳೆ ಚಿನ್ನ ಇದ್ದರೂ ನಾವಂತು ಚಿನ್ನದ ಗಣಿಗಾರಿಕೆಗೆ ನಮ್ಮ ಭೂಮಿ ಮಾತ್ರ ಕೊಡಲ್ಲ’ – ಗ್ರಾಮಸ್ಥರ ಅಭಿಮತ ಹೈಲೈಟ್ಸ್: ಚಿನ್ನಕ್ಕಿಂತ ಅನ್ನ ಕೊಡುವ ಚಿನ್ನದಂತ ಭೂಮಿಯೇ ನಮಗೆ ಮುಖ್ಯ ಮುದುಡಿ ಗ್ರಾಮದ ಸುತ್ತ ಮುತ್ತಲ ರೈತರ ಅಭಿಮತ 8-9 ಗ್ರಾಮಗಳ ಸರಹದ್ದಿನಲ್ಲಿ ಚಿನ್ನದ ನಿಕ್ಷೇಪದ ಗುಸುಗುಸು ಹೈಲೈಟ್ಸ್ ಮಾತ್ರವೇ ಓದಲು ಆ್ಯಪ್ ಡೌನ್‌ಲೋಡ್ ಮಾಡಿ ಹಾಸನದ ಕೆಲ ಹಳ್ಳಿಗಳಲ್ಲಿ ಚಿನ್ನದ ನಿಕ್ಷೇಪ ವದಂತಿ..! ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು..! ಹಾಸನ:ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮುದುಡಿ ಗ್ರಾಮದ ಸುತ್ತ ಮುತ್ತ ಚಿನ್ನದ ಗಣಿಯಿದೆ ಎಂಬ ಮಾಹಿತಿ ಹರಿದಾಡುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಲವು ಹಳ್ಳಿಗಳಲ್ಲಿ ಈಗ ಆತಂಕ ಶುರುವಾಗಿದೆ. 8-9 ಗ್ರಾಮಗಳ ಸರಹದ್ದಿನಲ್ಲಿ ಚಿನ್ನದ ನಿಕ್ಷೇಪವಿದೆ ಎಂಬ ಗುಸುಗುಸು ಹರಡಿದೆ. ಹೀಗಾಗಿ ಇಲ್ಲಿ ಯಾವಾಗ ಬೇಕಾದರೂ ಚಿನ್ನದ ಗಣಿಗಾರಿಗೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಮೂರು ತಿಂಗಳಿಂದಲೂ ಗ್ರಾಮದ ಸುತ್ತ ಮುತ್ತ ಲೋಹದ ಹಕ್ಕಿ ಬಂದು ಹೋಗುತ್ತಿತ್ತು. ಕೆಲವರು ಐಷಾರಾಮಿ ಕಾರುಗಳಲ್ಲಿ ಸ್ಥಳಕ್ಕೆ ಬಂದು ಸರ್ವೆ ಕಾರ್ಯ ಮಾಡುತ್ತಿದ್ದರು. ಈ ಸುದ್ದಿ ಗ್ರಾಮದ ಜನರ ಕಿವಿಗೆ ಯಾವಾಗ ಬಿತ್ತೋ, ಆಗ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ನಾವು ಅಲ್ಪ – ಸ್ವಲ್ಪ ಜಮೀನು ಇಟ್ಟುಕೊಂಡು ಇಲ್ಲಿ ಬೇಸಾಯ ಮಾಡುತ್ತಿದ್ದೇವೆ. ನಮಗೆ ಚಿನ್ನಕ್ಕಿಂತ ಅನ್ನ ಕೊಡುವ ಚಿನ್ನದಂಥ ಭೂಮಿಯೇ ಮುಖ್ಯ. ಈ ಭೂಮಿ ಇದ್ರೆ ನಮ್ಮ ಮಕ್ಕಳು, ಮೊಮ್ಮಕ್ಕಳು ಯಾರ ಹಂಗಿಲ್ಲದೆ ಅಲ್ಪ ಸ್ವಲ್ಪ ಬೆಳೆ ಬೆಳೆದು ನೆಮ್ಮದಿಯ ಜೀವನ ಸಾಗಿಸ್ತಾರೆ. ಹೀಗಾಗಿ, ಇಲ್ಲಿ ಒಂದು ವೇಳೆ ಚಿನ್ನ ಇದ್ದರೂ ನಾವಂತು ಚಿನ್ನದ ಗಣಿಗಾರಿಕೆಗೆ ತಮ್ಮ ಭೂಮಿ ಮಾತ್ರ ಕೊಡಲ್ಲ ಅಂತಿದ್ದಾರೆ. ಇದೀಗ ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜತೆಗೆ, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಕೂಡ ಆರಂಭವಾಗಲಿದ್ದು, ಶೀಘ್ರದಲ್ಲೇ ಯಾವ ಪ್ರಮಾಣದಲ್ಲಿ ಚಿನ್ನ ದೊರೆಯಲಿದೆ ಎನ್ನುವ ಮಾಹಿತಿಯೂ ಹರಿದಾಡಿದೆ. ಮುದುಡಿ ಗ್ರಾಮದ ಸುತ್ತಮುತ್ತ ಚಿನ್ನದ ನಿಕ್ಷೇಪ ಇರುವ ಬಗ್ಗೆ ಯಾವ ಅಧಿಕಾರಿಗಳು ಇದುವರೆಗೂ ಅಧಿಕೃತ ಮಾಹಿತಿ ನೀಡಿಲ್ಲ. ಗ್ರಾಮಸ್ಥರು ತಾಲ್ಲೂಕು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ. ಕಲಘಟಗಿ ಬಳಿ ಚಿನ್ನದ ನಿಕ್ಷೇಪ ಶೋಧ ಆದರೆ ಸ್ವಲ್ಪ ತಿಂಗಳ ಹಿಂದೆ ಈ ಭಾಗದಲ್ಲಿ ಪ್ರತಿನಿತ್ಯ ಹೆಲಿಕಾಪ್ಟರ್‌ಗಳು ತಳಮಟ್ಟದಲ್ಲಿ ಹಾರಾಟ ನಡೆಸಿದ್ದವು. ರೈತರ ಭೂಮಿಯಲ್ಲಿ ಅಲ್ಲಲ್ಲಿ ಕೊಳವೆ ಬಾವಿ ರೀತಿ ಕೊರೆದು ಮಣ್ಣನ್ನೂ ಕೂಡ ಪರಿಶೀಲನೆ ನಡೆಸಿದ್ದರಂತೆ. ಆದರೆ ಅವರೂ ಕೂಡ ಮಣ್ಣಿನ ಪರೀಕ್ಷೆ ಯಾಕೆ ಮಾಡುತ್ತಿದ್ದೇವೆ ಎಂದು ರೈತರಿಗೆ ತಿಳಿಸಿಲ್ಲ. ಇದು ರೈತರಿಗೆ ಮತ್ತಷ್ಟು ಆತಂಕ ಉಂಟು ಮಾಡಲು ಕಾರಣವಾಯ್ತು. ಈ ಭಾಗದಲ್ಲಿ ಚಿನ್ನದ ನಿಕ್ಷೇಪವಿದೆ, ಹೀಗಾಗಿಯೇ ಇಲ್ಲಿ ಸರ್ವೆ ಮಾಡಲಾಗಿದೆ ಎಂಬ ಒಬ್ಬರಿಂದ ಒಬ್ಬರಿಗೆ ಮಾತು ಕೇಳಿಬಂದಿದೆ. ಒಂದು ವೇಳೆ ಇಲ್ಲಿ ಚಿನ್ನದ ಅದಿರು ಇದ್ದರೂ ಕೂಡ ಚಿನ್ನದ ಆಸೆಯಿಂದ ಭೂಮಿ ಕೇಳಿಕೊಂಡು ನಮ್ಮ ಊರಿಗೆ ಮಾತ್ರ ಬರಬೇಡಿ ಅಂತಿದ್ದಾರೆ ಗ್ರಾಮಸ್ಥರು. ಮುದುಡಿ ಗ್ರಾಮದ ಸುತ್ತಮುತ್ತಲಿನ ಸಿದ್ದಾಪುರ, ಬಿಸಲೇಹಳ್ಳಿ, ಮುದುಡಿ ತಾಂಡ್ಯ, ಹಲಗೇನಹಳ್ಳಿ, ವೆಂಕಟಾಪುರ ಕಾವಲು, ಶಂಕರಪುರ, ಬೋರೆಹಳ್ಳಿ, ಪುಣ್ಯಕ್ಷೇತ್ರ ಗಂಗೆಮಡು ಸೇರಿದಂತೆ ಕೆಲವು ಗ್ರಾಮಗಳ ಸಂಪರ್ಕವಿದ್ದು, ಸಹಸ್ರಾರು ಕುಟುಂಬಗಳು ಒಕ್ಕಲುತನವನ್ನೇ ನಂಬಿ ಬದುಕು ಸಾಗಿಸುತ್ತಿವೆ. ಸೋನಭದ್ರದಲ್ಲಿ ಪತ್ತೆಯಾಗಿರುವುದು 3,350 ಟನ್ ಚಿನ್ನವಲ್ಲ, 52,806 ಟನ್ ಚಿನ್ನದ ಅದಿರು! ಈಗಾಗಲೇ ಗ್ರಾಮದ ಸರಹದ್ದಿನಲ್ಲಿ ಹಾದು ಹೋಗಿರುವ ರೈಲ್ವೆ ಮಾರ್ಗ, ಎತ್ತಿನ ಹೊಳೆ ನಾಲಾ ನಿರ್ಮಾಣ ಕಾಮಗಾರಿ, ಅನಿಲ ಪೂರೈಕೆ ಕೊಳವೆ ಮಾರ್ಗ, ಹೈಟೆಕ್ಷನ್ ವಿದ್ಯುತ್ ಮಾರ್ಗ ಸೇರಿದಂತೆ ಹಲವು ಯೋಜನೆಗಳಿಗೆ ಕೃಷಿ ಭೂಮಿ ವಶಕ್ಕೆ ಪಡೆಯಲಾಗಿದೆ. ಆದರೆ ಪರಿಹಾರ ವಿತರಣೆ ಮಾತ್ರ ಘೋಷಣೆಗೆ ಸೀಮಿತವಾಗಿದೆ. ಹಿಂದೆ ಇದೇ ತಾಲ್ಲೂಕಿನ ರಾಂಪುರ, ಶಶಿವಾರ, ಜೆಸಿ ಪುರ, ಕಣಕಟ್ಟೆ ಗ್ರಾಮಗಳಲ್ಲಿಯೂ ಖನಿಜ ನಿಕ್ಷೇಪವಿದೆ ಎಂದು ಆಂಧ್ರ ಪ್ರದೇಶ ಮೂಲದ ಅಧಿಕಾರಿಗಳು ಬಂದು ಸರ್ವೇ ಕಾರ್ಯ ಮಾಡಿ ರೈತರನ್ನು ಒಕ್ಕಲೆಬ್ಬಿಸಿದ್ದು, ಇದುವರೆವಿಗೂ ಅಲ್ಲಿನ ರೈತರಿಗೆ ಸರಿಯಾದ ಮಾಹಿತಿ ನೀಡಿದ ಸುಮ್ಮನಾಗಿದ್ದಾರೆ. ಒಟ್ಟಾರೆ ಭೂಮಿಯನ್ನು ಮನಬಂದಂತೆ ಅಗೆದು ಹಾಳು ಮಾಡಲಾಗಿದ್ದು, ಬಯಲು ಸೀಮೆಯಲ್ಲಿ ಮಳೆಯನ್ನೇ ನಂಬಿಕೊಂಡು ಬದುಕುತ್ತಿರುವವರ ನಡುವೆ ಈ ಭಾಗದಲ್ಲಿ ಚಿನ್ನ ಸಿಗುತ್ತೆ ಅಂತಿರೋದು ರೈತರ ನಿದ್ದೆಗೆಡಿಸಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡುವ ಮೂಲಕ ರೈತರಿಗೆ ಧೈರ್ಯ ತುಂಬಬೇಕಿದೆ.