ಬೆಂಗಳೂರಿನ ನಿವೇಶನ ನೀಡುವುದಾಗಿ ಬೃಂದಾವನ ಪ್ರಾಪರ್ಟಿಸ್ ಮಾಲೀಕರಿಂದ ಸಾರ್ವಜನಿಕರಿಗೆ ಸುಮಾರು ಎಪ್ಪತ್ತೈದು ಕೋಟಿ ರೂಪಾಯಿ ವಂಚನೆಯಾಗಿದ್ದು. ಗೃಹ ಇಲಾಖೆ ಮಧ್ಯಪ್ರವೇಶಿಸಿ ಈ ಪ್ರಕರಣವನ್ನು ಸಿಒಡಿ ಅಥವಾ ಸಿಐಡಿ ತನಿಖೆಗೆ ವಹಿಸಬೇಕೆಂದು ವಂಚನೆಗೊಳಗಾದ ಕರ್ನಾಟಕ ಜನಪರ ಸಮಾನ ವೇದಿಕೆ ಸದಸ್ಯರು ಆಗ್ರಹಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ವೆಂಕಟರೆಡ್ಡಿ, ರವಿ ಕುಮಾರ್, ಪ್ರಧಾನ ಕಾರ್ಯದರ್ಶಿ ಸತೀಶ ,ಇಬ್ರಾಹಿಂ ,ಉಪಾಧ್ಯಕ್ಷರುಗಳು ವಿದ್ಯಾಶ್ರೀ ಜೆ . ಖಜಾಂಚಿ , ದಿವಾಕರ್ ಸಹ ಕಾರ್ಯದರ್ಶಿ ಆಶಾ ಎಸ್ ಸಂಘಟನಾ ಕಾರ್ಯದರ್ಶಿ ರೂಪ ಜಂಟಿ ಕಾರ್ಯದರ್ಶಿ ಬೃಂದಾವನ ಪ್ರಾಪರ್ಟಿಸ್ ನಿಂದ ಸುಮಾರು ಎರಡು ಸಾವಿರದ ಎಂಟನೂರು ಮಂದಿ ಮೋಸಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ನೊಂದವರು ಪ್ತಶ್ನಿಸಲು ಮುಂದಾದರೆ ಅವರ ಮೇಲೆ ಮಾಲೀಕ ದಿನೇಶ್ ಗೌಡ ಕಡೆಯಿಂದ ಬೆದರಿಕೆ ಹಾಕಲಾಗುತ್ತಿದೆ. ವಂಚನೆಗೊಳಗಾದ ಜನರು ಕಳೆದ ಕೆಲ ವಾರಗಳ ಹಿಂದೆ ಪೋಲಿಸ್ ಠಾಣೆ ಎದುರುಗಡೆ ತಮ್ಮ ಅಳಲು ತೋಡಿಕೊಂಡಿದ್ದು ಪೋಲಿಸ್ ಇಲಾಖೆ ಸಾಂತ್ವನ ನೀಡಿ ಅವರ ಮೇಲೆ ಕ್ರಮ ಜರುಗುಸಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು ಆದರೆ ಇದುವರೆಗೂ ಪೋಲಿಸ್ ಇಲಾಖೆಯಿಂದ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ನೆಲಮಂಗಲ, ಹೆಸರಘಟ್ಟ, ಯಂಟಗಾನಹಳ್ಳಿ, ತಾವರೆಕೆರೆ, ಕನಕಪುರ ಸೇರಿದಂತೆ ವಿವಿಧಡೆ ನಿವೇಶನ ನೀಡುವುದಾಗಿ 30×40, ಸೈಟನ್ನು ಐದು ಲಕ್ಷ, ಏಳೂವರೆ ಲಕ್ಷ, ಎಂಟು ಲಕ್ಷಗಳನ್ನು ಗ್ರಾಹಕರಿಂದ ಪಡೆದು, ಇನ್ನೂ ಕೆಲವರು 4ರಿಂದ5 ವರ್ಷ ದಿಂದ ತಿಂಗಳಿಗೊಮ್ಮೆ ಇಎಮ್ ಐ ಪಾವತಿಸುತ್ತಾ ಬಂದಿದ್ದಾರೆ, ಜುಲೈ ತಿಂಗಳಲ್ಲಿ ನಿವೇಶನ ನೋಂದಣಿ ಮಾಡಿಕೊಡುವುದಾಗಿ ತಿಳಿಸಿ ನಿವೇಶನ ಕೊಳ್ಳುವವರಿಗೆ ವಂಚಿಸಿದ್ದಾರೆ ಎಂದು ದೂರಿದರು.