ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್‌ನ ಈ ಫೈಬರ್ ಪ್ಲಾನ್ ಆಫರ್ ಅಡಿಯಲ್ಲಿ ಬಳಕೆದಾರರು 30 ಎಮ್‌ಬಿಪಿಎಸ್ ವೇಗವನ್ನು ಪಡೆಯುತ್ತಾರೆ. ಅಲ್ಲದೆ, ಮೂರು ತಿಂಗಳಲ್ಲಿ ಒಟ್ಟು 3300 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಈ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ದೂರವಾಣಿ ಸಂಪರ್ಕವನ್ನು ಸಹ ಒದಗಿಸಲಾಗುತ್ತಿದೆ. ಈ ಫೋನ್‌ನಿಂದ ನೀವು ಯಾವುದೇ ನೆಟ್‌ವರ್ಕ್‌ನಲ್ಲಿ ಮೂರು ತಿಂಗಳವರೆಗೆ ಅನಿಯಮಿತ ಉಚಿತ ಕರೆ ಸೌಲಭ್ಯವನ್ನು ಪಡೆಯಬಹುದಾಗಿದೆ. Subscribe to updates ನವದೆಹಲಿ: ಕರೋನಾ ಯುಗ ಒಂದರ್ಥದಲ್ಲಿ ವರ್ಕ್ ಫ್ರಮ್ ಹೋಂ ಸಂಸ್ಕೃತಿಗೆ ದಾರಿಮಾಡಿಕೊಟ್ಟಿದೆ. ಇದರಿಂದಾಗಿ ಕ್ರಮೇಣ ಇಂಟರ್ನೆಟ್ ಬೇಡಿಕೆಯೂ ಹೆಚ್ಚಾಗಿದೆ. ಈ ಮಧ್ಯೆ ಏರ್‌ಟೆಲ್ ( Airtel), ಜಿಯೋ (Jio) ಮತ್ತು ವಿ (Vi)ನಂತಹ ಖಾಸಗಿ ಆಪರೇಟರ್‌ಗಳಿಗೆ ಟಕ್ಕರ್ ನೀಡಿರುವ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಅಗ್ಗದ ದರದಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲು ಧನ್ಸು ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಸಂಪರ್ಕದಲ್ಲಿ ಸಾಕಷ್ಟು ಕೊಡುಗೆಗಳನ್ನುನೀಡಲಾಗುತ್ತಿದೆ. ವಿಶೇಷ ವಿಷಯವೆಂದರೆ ಕೇವಲ 450 ರೂ.ಗಿಂತ ಕಡಿಮೆ ದರದಲ್ಲಿ ಈ ಸೌಲಭ್ಯ ಸಿಗುತ್ತಿದೆ. ಹೊಸ ಬ್ರಾಡ್‌ಬ್ಯಾಂಡ್ ಯೋಜನೆ: ಟೆಕ್ ಸೈಟ್ ಕೆರಾಲೆಟೆಲೆಕಾಮ್ (keralatelecom) ಪ್ರಕಾರ, ಬಿಎಸ್ಎನ್ಎಲ್ ಭಾರತ್ ಫೈಬರ್ (FTTH) ಬ್ರಾಡ್ಬ್ಯಾಂಡ್ ಅಡಿಯಲ್ಲಿ ಫೈಬರ್ ಬೇಸಿಕ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಬೆಲೆ 449 ರೂಪಾಯಿ. ಈ ಯೋಜನೆಯಲ್ಲಿ 90 ದಿನಗಳವರೆಗೆ ಉತ್ತಮ ಕೊಡುಗೆಗಳು ಲಭ್ಯವಿದೆ. ಇದನ್ನೂ ಓದಿ – ಈ App ಇದ್ದರೆ ಸುಲಭವಾಗಿ ಪತ್ತೆ ಮಾಡಬಹುದು ಕಳೆದುಹೋದ Gadget ಉಚಿತ ಇನ್ಸ್ಟಾಲೇಶನ್: ಬಿಎಸ್‌ಎನ್‌ಎಲ್‌ನ (BSNL) ಈ ಬ್ರಾಡ್‌ಬ್ಯಾಂಡ್ ಸಂಪರ್ಕದ ವಿಶೇಷ ಪ್ರಯೋಜನವೆಂದರೆ ಗ್ರಾಹಕರು ಸಂಪರ್ಕವನ್ನು ಪಡೆಯಲು ಯಾವುದೇ ಇನ್ಸ್ಟಾಲೇಶನ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇನ್ಸ್ಟಾಲೇಶನ್ ಸಂಪೂರ್ಣ ಉಚಿತವಾಗಿರುತ್ತದೆ. 3300 ಜಿಬಿ ಡೇಟಾ ಪಡೆಯಲಾಗುತ್ತಿದೆ : ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್‌ನ ಈ ಫೈಬರ್ ಪ್ಲಾನ್ ಆಫರ್ ಅಡಿಯಲ್ಲಿ ಬಳಕೆದಾರರು 30 ಎಮ್‌ಬಿಪಿಎಸ್ ವೇಗವನ್ನು ಪಡೆಯುತ್ತಾರೆ. ಇದಲ್ಲದೆ, ಮೊದಲ ಮೂರು ತಿಂಗಳವರೆಗೆ 3300 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಅನಿಯಮಿತ ಕರೆ ಸೌಲಭ್ಯ: ಈ ಬ್ರಾಡ್‌ಬ್ಯಾಂಡ್ (BSNL Broadband) ಸಂಪರ್ಕದೊಂದಿಗೆ ದೂರವಾಣಿ ಸಂಪರ್ಕವನ್ನು ಸಹ ಒದಗಿಸಲಾಗುತ್ತಿದೆ. ಈ ಫೋನ್‌ನಿಂದ ನೀವು ಯಾವುದೇ ನೆಟ್‌ವರ್ಕ್‌ನಲ್ಲಿ ಮೂರು ತಿಂಗಳವರೆಗೆ ಅನಿಯಮಿತ ಉಚಿತ ಕರೆ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದನ್ನೂ ಓದಿ – BSNL Plans : ಕೇವಲ 47 ಪ್ಲಾನ್ ನಲ್ಲಿ ಸಿಗಲಿದೆ unlimited calls ಜೊತೆ ಪ್ರತಿದಿನ 1 GB Data ಆಫರ್ ಮೂರು ತಿಂಗಳು ಮಾತ್ರ : ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬ್ಯಾಂಡ್ ಸಂಪರ್ಕದಲ್ಲಿನ ಈ ಎಲ್ಲಾ ಕೊಡುಗೆಗಳು ಕೇವಲ ಮೂರು ತಿಂಗಳು ಮಾತ್ರ ಮಾನ್ಯವಾಗಿರುತ್ತದೆ. ಸಿಂಧುತ್ವ ಮುಗಿದ ನಂತರ, ಬಳಕೆದಾರರು ಪ್ರತಿ ತಿಂಗಳು 599 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಬಿಎಸ್‌ಎನ್‌ಎಲ್‌ನ ಈ ಕೊಡುಗೆ ಹೊಸದಲ್ಲ ಎಂಬುದು ಗಮನಾರ್ಹ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕಂಪನಿಯು ಅಂತಹ ಯೋಜನೆಯನ್ನು ಹೊರತಂದಿತ್ತು. ಅಗ್ಗದ ದರದ ಕಾರಣ, ಈ ಯೋಜನೆ ದೇಶಾದ್ಯಂತ ಜನಪ್ರಿಯವಾಗಿತ್ತು. ಈ ದಿನಗಳಲ್ಲಿ ವರ್ಕ್ ಫ್ರಮ್ ಹೋಂ ಮತ್ತು ಆನ್‌ಲೈನ್ ತರಗತಿಯಿಂದಾಗಿ ಬ್ರಾಡ್‌ಬ್ಯಾಂಡ್ ಸಂಪರ್ಕದ ಬೇಡಿಕೆ ಹೆಚ್ಚಾಗಿದೆ. ಈ ಹೊಸ ಕೊಡುಗೆ ದೇಶಾದ್ಯಂತ ತಮ್ಮ ಗ್ರಾಹಕರನ್ನು ಹೆಚ್ಚಿಸುತ್ತದೆ ಎಂದು ಬಿಎಸ್‌ಎನ್‌ಎಲ್ ಆಶಿಸಿದೆ. ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ… Android Link – https://bit.ly/3hDyh4G Apple Link – https://apple.co/3loQYe ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.