National News Analysis

23 December 2024, 4:13 AM

ಇವರಿಗೆ ಮಾತ್ರ ಸೊಳ್ಳೆ ಹೆಚ್ಚಾಗಿ ಕಚ್ಚುತ್ತದೆ , ಇದರ ಹಿಂದಿನ ಕಾರಣ ತಿಳಿದಿರಲಿ. ಸೊಳ್ಳೆಗಳು ಬೆವರು ಮತ್ತು ಲ್ಯಾಕ್ಟಿಕ್ ಆಮ್ಲವನ್ನು ಇಷ್ಟಪಡುತ್ತವೆ. ಆದ್ದರಿಂದ, ವ್ಯಾಯಾಮ ಅಥವಾ ವಾಕಿಂಗ್ ನಿಂದ ಬಂದ ನಂತರ, ತಪ್ಪದೇ ಸ್ನಾನ ಮಾಡಲು ಪ್ರಯತ್ನಿಸಿ.

ನವದೆಹಲಿ: ನೀವು ಗಮನಿಸಿರಬಹುದು ಕೆಲವರಿಗೆ ಸೊಳ್ಳೆ ಅತಿಯಾಗಿ ಕಚ್ಚುತ್ತದೆ. ಸೊಳ್ಳೆ ಕಚ್ಚಿಸಿಕೊಂಡವರು ಹೇಳಿರುವುದನ್ನೂ ಕೇಳಿರಬಹುದು. ನನಗೇ ಯಾಕೆ ಸೊಳ್ಳೆ ಕಚ್ಚುತ್ತದೆ ಎಂದು. ಹೌದು ಇದಕ್ಕೆ ಕಾರಣ ಇದೆ. ಸೊಳ್ಳೆ ಯಾಕೆ ಕೆಲವರಿಗೆ ಹೆಚ್ಚಾಗಿ ಕಚ್ಚುತ್ತದೆ ಎನ್ನುವುದು ಕೆಲವು ಅಂಶಗಳನ್ನು ಒಳಗೊಂಡಿದೆ. ಸೊಳ್ಳೆ ಕಡಿತವು ರಕ್ತದ ಪ್ರಕಾರ, ಚಯಾಪಚಯ, ಚರ್ಮದ ಬ್ಯಾಕ್ಟೀರಿಯಾ ಮತ್ತು ನೀವು ಧರಿಸಿರುವ ಬಟ್ಟೆಗಳಂತಹ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ.  ಬೆವರು :  ಸೊಳ್ಳೆಗಳು ಬೆವರು ಮತ್ತು ಲ್ಯಾಕ್ಟಿಕ್ ಆಮ್ಲವನ್ನು ಇಷ್ಟಪಡುತ್ತವೆ. ಆದ್ದರಿಂದ, ವ್ಯಾಯಾಮ (exercise) ಅಥವಾ ವಾಕಿಂಗ್ ನಿಂದ (walking) ಬಂದ ನಂತರ, ತಪ್ಪದೇ ಸ್ನಾನ ಮಾಡಲು ಪ್ರಯತ್ನಿಸಿ. ಇಲ್ಲವಾದರೆ, ಬೆವರಿನಿಂದಾಗಿ ಸೊಳ್ಳೆಗಳ ಕಡಿತ ಹೆಚ್ಚಾಗಬಹುದು.   ಇದನ್ನೂ ಓದಿ: Sea Salt benefits : ಉಪ್ಪು ಊಟದ ರುಚಿ ಹೆಚ್ಚಿಸುವುದು ಮಾತ್ರವಲ್ಲ ಈ ಸಮಸ್ಯೆಗಳನ್ನೂ ನಿವಾರಿಸುತ್ತದೆ ಮದ್ಯ ಸೇವನೆ : ಒಂದು ಅಧ್ಯಯನದ ಪ್ರಕಾರ, ಹೆಚ್ಚು ಮದ್ಯ ( Alcohol)ಸೇವಿಸುವ ಜನರತ್ತ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆಯಂತೆ. ಆದ್ದರಿಂದ ಈ ವಿಚಾರ ಗಮನದಲ್ಲಿ ಇಟ್ಟುಕೊಳ್ಳುವುದು ಸೂಕ್ತ.  ಚಯಾಪಚಯ : ಚಯಾಪಚಯ ಕ್ರಿಯೆಯ ಕಾರಣದಿಂದಾಗಿ, ದೇಹದಿಂದ ಬಿಡುಗಡೆಯಾದ ಕಾರ್ಬನ್ ಡೈಆಕ್ಸೈಡ್ ಮೇಲೆ ಕೂಡಾ ಸೊಳ್ಳೆ ಕಡಿತ  (Mosquito bite) ನಿರ್ಧರಿತವಾಗುತ್ತದೆ. ಇದರ ತೀಕ್ಷ್ಣ ವಾಸನೆಯು ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಹೆಣ್ಣು ಸೊಳ್ಳೆಗಳು ತಮ್ಮ ಸೆನ್ಸಿಂಗ್ ಆರ್ಗನ್ ಸಹಾಯದಿಂದ ಈ ವಾಸನೆಯನ್ನು ಗುರುತಿಸಿ, ವ್ಯಕ್ತಿಯನ್ನು ಹೆಚ್ಚು ಕಚ್ಚುತ್ತವೆ. ಇದನ್ನೂ ಓದಿ: Clove Oil Benefits : ಮುಖದ ಕಲೆ ಮತ್ತು ಮೊಡವೆಗಳಿಗೆ ಬಳಿಸಿ ‘ಲವಂಗದ ಎಣ್ಣೆ’ : ಹೇಗೆ ಬಳಸುವುದು ಇಲ್ಲಿದೆ ಸಂಪೂರ್ಣ ಮಾಹಿತಿ ಅಧ್ಯಯನದ ಪ್ರಕಾರ, ಗರ್ಭಿಣಿಯರು ಸಾಮಾನ್ಯ ಮನುಷ್ಯರಿಗಿಂತ ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತಾರೆ. ಅದಕ್ಕಾಗಿಯೇ ಸೊಳ್ಳೆಗಳು ಅವರನ್ನು ಹೆಚ್ಚು ಕಚ್ಚುತ್ತವೆ. ಚರ್ಮದ ಬ್ಯಾಕ್ಟೀರಿಯಾ : ಚರ್ಮದಲ್ಲಿ ಹಲವು ವಿಧದ ಬ್ಯಾಕ್ಟೀರಿಯಾಗಳಿವೆ. ಕೆಲವೊಮ್ಮೆ ಸೊಳ್ಳೆಗಳು ಅದರತ್ತ ಆಕರ್ಷಿತಗೊಂಡು ಕಚ್ಚುತ್ತವೆ. ಇದಕ್ಕೆ ಕಾರಣ ಸೊಳ್ಳೆಗಳನ್ನು ಆಕರ್ಷಿಸುವ ಕೆಲವು ವಿಧದ ಬ್ಯಾಕ್ಟೀರಿಯಾಗಳು. ಚರ್ಮದ ಮೇಲೆ ಈ ಬ್ಯಾಕ್ಟೀರಿಯಾ (bacteria) ಇರುವವರ ಮೇಲೆ ಸೊಳ್ಳೆಗಳು ದಾಳಿ ಮಾಡುತ್ತವೆ. ರಕ್ತದ ವಿಧ : ಓ ರಕ್ತದ ಗುಂಪು (blood group) ಹೊಂದಿರುವ ಜನರ ಕಡೆಗೆ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ ಎಂದು ನಂಬಲಾಗಿದೆ. ಇದರ ಹೊರತಾಗಿ, ಇದು A ರಕ್ತದ ಗುಂಪು ಹೊಂದಿರುವ ಜನರೊಂದಿಗೆ ಸಹ ಕಂಡುಬರುತ್ತದೆ. ಬಟ್ಟೆಗಳ ಬಣ್ಣವು ಕೂಡಾ ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ… Android Link – https://bit.ly/3hDyh4G Apple Link – https://apple.co/3hEw2hy ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Vinkmag ad

Read Previous

kpcc womes state prasident Pushpa Amaranath Bengsluru prasint Vimala venkat other congress leader present.in Gandhi stachue

Read Next

Milann Fertility & Birthing Centre in Association with HCG Cancer Hospital Bengaluru Organizes Awareness Talk on the Occasion of Gynaecological Cancer Awareness MonthThe event witnessed doctors speaking on ovarian cancer and fertility preservation among cancer patients

Leave a Reply

Your email address will not be published. Required fields are marked *

10 − seven =

Most Popular