ಅಕ್ಟೋಬರ್ 1, 2020 ರಂದು ಬಿಎಸ್ಎನ್ಎಲ್ ನಾಲ್ಕು ಫೈಬರ್ ಪ್ಲಾನ್‌ಗಳನ್ನು ನೀಡುವ ಮೂಲಕ ಬಿಎಸ್ಎನ್ಎಲ್ ಭಾರತ್ ಫೈಬರ್ ಅನ್ನು ಪ್ರಾರಂಭಿಸಿತು. ಸದ್ಯ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆ 499 ರೂ.ಗಳಿಗೆ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ.
ದೇಶದಲ್ಲಿ ಮಾರಕ ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಹಲವು ಉದ್ಯೋಗಿಗಳು ಮನೆಯಲ್ಲೇ ಕೆಲಸ ಮಾಡುವಂತಾಗಿದೆ. ಜೊತೆಗೆ ಮಕ್ಕಳಿಗೂ ಆನ್‌ಲೈನ್ ಕ್ಲಾಸ್ ನಡೆಯುತ್ತಿದೆ. ಈ ಹಿನ್ನೆಲೆ ಇಂಟರ್‌ನೆಟ್ ಅದರಲ್ಲೂ ಬ್ರಾಡ್‌ಬ್ಯಾಂಡ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರೊಂದಿಗೆ ಸರ್ಕಾರಿ ಹಾಗೂ ಖಾಸಗಿ ಸೇರಿ ಹಲವು ಕಂಪನಿಗಳೊಂದಿಗೆ ಸ್ಪರ್ಧೆಯೂ ಹೆಚ್ಚಿದೆ. ಸದ್ಯ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆ 499 ರೂ.ಗಳಿಗೆ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ.
ಅಕ್ಟೋಬರ್ 1, 2020 ರಂದು ಬಿಎಸ್ಎನ್ಎಲ್ ನಾಲ್ಕು ಫೈಬರ್ ಪ್ಲಾನ್‌ಗಳನ್ನು ನೀಡುವ ಮೂಲಕ ಬಿಎಸ್ಎನ್ಎಲ್ ಭಾರತ್ ಫೈಬರ್ ಅನ್ನು ಪ್ರಾರಂಭಿಸಿತು. ಆರಂಭದಲ್ಲಿ ಪ್ರಾರಂಭಿಸಿದ ನಾಲ್ಕು ಯೋಜನೆಗಳು – ಫೈಬರ್ ಬೇಸಿಕ್, ಫೈಬರ್ ವ್ಯಾಲ್ಯೂ, ಫೈಬರ್ ಪ್ರೀಮಿಯಂ ಮತ್ತು ಫೈಬರ್ ಅಲ್ಟ್ರಾ. ಈ ಅವಧಿಯಲ್ಲಿ, ಅನೇಕ ಹೊಸ ಪ್ಲ್ಯಾನ್‌ಗಳನ್ನು ಸೇರಿಸಲಾಯಿತು. ಸದ್ಯ ಇದಕ್ಕೆ ಮತ್ತಷ್ಟು ಆಫರ್ ಗಳನ್ನು ಸೇರಿಸಲಾಗಿದೆ. ಈ ಬಗ್ಗೆ ವಿವರ ಇಲ್ಲಿದೆ.
ಹೊಸ 499 ರೂ. ಪ್ಲಾನ್:
ಬಿಎಸ್‌ಎನ್‌ಎಲ್ ಸಂಸ್ಥೆ 499 ರೂ.ಗಳ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ. ಇದು ಕೆಲವು ವೃತ್ತ ವಲಯಗಳಲ್ಲಿ ಲಭ್ಯವಾಗಲಿದೆ. ಈ ಬ್ರಾಡ್‌ಬ್ಯಾಂಡ್ ಯೋಜನೆ 10Mbps ಡೌನ್‌ಲೋಡ್ ವೇಗವನ್ನು 40GB ವರೆಗೆ ನೀಡುತ್ತದೆ. ಇದು ಪೋಸ್ಟ್ FUP ಡೌನ್‌ಲೋಡ್ ವೇಗ 512Kbps ಹೊಂದಿದೆ. ಈ ಹೊಸ ಬಿಎಸ್ಎನ್ಎಲ್ ಫೈಬರ್ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಆರು ತಿಂಗಳವರೆಗೆ ಈ ಯೋಜನೆ ಅನ್ವಯಿಸುತ್ತದೆ, ನಂತರ ಗ್ರಾಹಕರು 150ಜಿಬಿ ಯೋಜನೆಗೆ ವಲಸೆ ಹೋಗುತ್ತಾರೆ. ಈ ಬೆಳವಣಿಗೆಯನ್ನು ಮೊದಲು ಕೇರಳ ಟೆಲಿಕಾಂ ಗುರುತಿಸಿದೆ. ಇನ್ನು ಹೊಸದಾಗಿ ಪರಿಷ್ಕೃತಗೊಂಡಿರುವ ಯೋಜನೆಗಳಿಗೆ ಬಂದರೆ, ಎಲ್ಲಾ ಬಿಎಸ್‌ಎನ್‌ಎಲ್ ಬಳಕೆದಾರರು – ಹೊಸ ಮತ್ತು ಅಸ್ತಿತ್ವದಲ್ಲಿರುವವರು – ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳಿಗೆ ಚಂದಾದಾರರಾಗಬಹುದು. ಇದನ್ನು ಫೈಬರ್ ಬೇಸಿಕ್ ಪ್ಲಾನ್ ಎಂದೂ ಕರೆಯಲ್ಪಡುತ್ತಿದ್ದು, 3.3 ಟಿಬಿ ವೇಗ ಅಥವಾ 3300 ಜಿಬಿ ಎಫ್‌ಯುಪಿ ಮಿತಿಯವರೆಗೆ 30 ಎಮ್‌ಬಿಪಿಎಸ್ ವೇಗವನ್ನು ನೀಡುತ್ತದೆ. ಎಫ್‌ಯುಪಿ ಮಿತಿಯನ್ನು ತಲುಪಿದ ನಂತರ, ವೇಗವನ್ನು 2 ಎಮ್‌ಬಿಪಿಎಸ್‌ಗೆ ಇಳಿಸಲಾಗುತ್ತದೆ. ಈ ಯೋಜನೆಯನ್ನು ಆರಿಸಿಕೊಳ್ಳುವ ಬಳಕೆದಾರರು ಭಾರತದೊಳಗಿನ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆ ಪಡೆಯುತ್ತಾರೆ.