National News Analysis

10 December 2024, 7:52 AM

ಈ ಕಾರಿಗೆ ಪೆಟ್ರೋಲ್‌, ಡೀಸೆಲ್‌ ಬೇಡವೇ ಬೇಡ, ಚಾರ್ಜೂ ಹಾಕಂಗಿಲ್ಲ! ಮಾರುತಿ ಸುಜುಕಿಯಿಂದ ಅದ್ಭುತ ಪ್ರಯೋಗ!

ಈ ವಿಶೇಷ ಕಾರಿಗೆ ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಅಗತ್ಯವೇ ಇಲ್ಲ. ಹಾಗೆ ನೋಡಿದರೆ ಚಾರ್ಜಿಂಗೂ ಹಾಕಬೇಕಿಲ್ಲ. ಕಾರಿನಲ್ಲಿ ಕುಳೀತು ನೀವು ಎಷ್ಟು ದೂರ ಸಾಗಿದರೂ ಸಾಗುತ್ತಲೇ ಇರುತ್ತದೆ ಈ ಕಾರು!

undefined
undefined

ಹೈಲೈಟ್ಸ್‌:

  • ಈ ಕಾರಿಗೆ ಪೆಟ್ರೋಲ್‌, ಡೀಸಲ್‌ ಅಗತ್ಯವೇ ಇಲ್ಲ!
  • ಚಾರ್ಜಿಂಗೂ ಮಾಡದೆ ಓಡಬಲ್ಲದು ಈ ಜಾದೂ ಕಾರು
  • ಮಾರುತಿ ಸುಜುಕಿ, ಟೊಯೊಟಾದಿಂದ ನಡೆಯುತ್ತಿದೆ ಇಂತಹದೊಂದು ಅದ್ಭುತ ಪ್ರಯೋಗ

hybrid cars

ಹೊಸದಿಲ್ಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ಎಲೆಕ್ಟ್ರಿಕ್ ವಾಹನಗಳು ಸಂಚಲನ ಸೃಷ್ಟಿಸಿವೆ. ಈಗಾಗಲೇ ಬಹುತೇಕ ಕಂಪೆನಿಗಳು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲು ಮುಂದಾಗಿದೆ. ಆದರೆ, ಪ್ರಸ್ತುತ ರಸ್ತೆಗಿಳಿದಿರುವ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಲು ಸೂಪರ್ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ಗಳಿಲ್ಲ ಎಂಬ ಕೊರಗು ಗ್ರಾಹಕರಲ್ಲಿದೆ.

ಹೀಗಾಗಿ ಎಲೆಕ್ಟ್ರಿಕ್‌ ವಾಹನಗಳ ಬೆಳವಣಿಗೆ ಕುಂಟುತ್ತಾ ಸಾಗಿದೆ. ಆದರೆ, ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಗಳು ಚಾರ್ಚಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿವೆ. ಇಂಧನವನ್ನೂ ಹಾಕದೆ, ಚಾರ್ಜಿಂಗೂ ಮಾಡದೆ ಓಡಬಲ್ಲ ಕಾರನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ.

ಈ ವಿಶೇಷ ಕಾರಿಗೆ ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಅಗತ್ಯವೇ ಇಲ್ಲ. ಹಾಗೆ ನೋಡಿದರೆ ಚಾರ್ಜಿಂಗೂ ಹಾಕಬೇಕಿಲ್ಲ. ಕಾರಿನಲ್ಲಿ ಕುಳಿತು ನೀವು ಎಷ್ಟು ದೂರ ಸಾಗಿದರೂ ಸಾಗುತ್ತಲೇ ಇರುತ್ತದೆ ಈ ಕಾರು! ಇಂತಹದೊಂದು ಅದ್ಭುತ ಪ್ರಯೋಗಕ್ಕೆ ಇಳಿದಿವೆ ಮಾರುತಿ ಸುಜುಕಿ ಮತ್ತು ಟೊಯೋಟಾ ಕಂಪನಿಗಳು.
ವಾಹನ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಆಘಾತ ನೀಡಿದ ಮಾರುತಿ ಸುಜುಕಿ

ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಹ್ಯುಂಡೈ ಹಾಗೂ ಇತರ ಕಂಪನಿಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ವಿಷಯದಲ್ಲಿ ಮಾರುತಿ ಸುಜುಕಿ ಕಂಪನಿ ಸ್ವಲ್ಪ ಹಿಂದೆಯೇ ಉಳಿದಿದೆ. ಆದರೆ, ಇದಕ್ಕೂ ಒಂದು ಕಾರಣವಿದೆ ಎಂದಿದೆ ಮಾರುತಿ-ಸುಜುಕಿ. ಈ ಕಂಪೆನಿ ಇದೀಗ ಹೊಸ ಮಾದರಿಯ ಹೈಬ್ರಿಡ್ ಎಲೆಕ್ಟ್ರಿಕ್ ಕಾರನ್ನು (ಎಚ್‌ಇವಿ) ನಿರ್ಮಿಸುತ್ತಿದೆ. ಈ ಕಾರಿನ ವಿಶೇಷತೆ ಎಂದರೆ ಇದಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ಬೇಕಿಲ್ಲ. ಹಾಗೆಯೇ ಹೊರಗಿನಿಂದ ಚಾರ್ಜ್ ಕೂಡ ಮಾಡಬೇಕಿಲ್ಲ. ಮತ್ತೆ ಈ ಕಾರು ಚಲಿಸುವುದಾದರೂ ಹೇಗೆ ಎನ್ನುತ್ತೀರಾ. ಈ ಕಾರು ಓಡುತ್ತಿರುವಾಗಲೇ ತನ್ನಷ್ಟಕ್ಕೆ ತಾನೇ ಚಾರ್ಜ್‌ ಆಗುವ ತಂತ್ರಜ್ಞಾನ ಹೊಂದಿರಲಿದೆ. ಅಂದರೆ ಈ ಕಾರಿನ ಬ್ಯಾಟರಿಗಳು ಸ್ವಯಂ ಚಾಲಿತವಾಗಿ ಚಾರ್ಜ್ ಆಗಲಿದೆ.

ಎಲೆಕ್ಟ್ರಿಕ್‌ ಬದಲು ಪರ್ಯಾಯ ಇಂಧನವಾಗಿ ‘ಹೈಡ್ರೋಜನ್‌’ ಸೂಕ್ತ ಎಂದ ಮಾರುತಿ ಅಧ್ಯಕ್ಷ

ಸ್ವಯಂಚಾಲಿತ ಚಾರ್ಜ್‌ ಹವಾಹನ ಓಡಿಸುವಾಗ ಬ್ಯಾಟರಿಗಳು ಆಟೋಮ್ಯಾಟಿಕ್ ಚಾರ್ಜ್ ಆಗಲಿದ್ದು, ಅದರಂತೆ ಇಂಧನ ತುಂಬಿಸದೇ ಅಥವಾ ಚಾರ್ಜ್ ಸ್ಟೇಷನ್ಗೆ ಹೋಗದೇ ಕಾರನ್ನು ಓಡಿಸುತ್ತಲೇ ಇರಬಹುದು. ಇದರಿಂದ ಇಂಧನದ ಖರ್ಚು ಉಳಿಯಲಿದೆ. ಜತೆಗೆ ಇದರಿಂದ ಯಾವುದೇ ಮಾಲಿನ್ಯ ಕೂಡ ಇಲ್ಲದಿರುವುದರಿಂದ ಪರಿಸರ ಸ್ನೇಹಿ ತಂತ್ರಜ್ಞಾನ ಎನಿಸಿದೆ.

ಈ ವಾಹನದ ಬೆಲೆ ಎಷ್ಟಿರಲಿದೆ?
ಇಂಧನವನ್ನೂ ಹಾಕದೇ, ಚಾರ್ಜನ್ನೂ ಮಾಡದೆ ತನ್ನಷ್ಟಕ್ಕೆ ತಾನೇ ಓಡುವ ಈ ಕಾರಿನ ಬೆಲೆ ರಷ್ಟಿರಬಹದು ಎಂಬ ಪ್ರಶ್ನೆ ಎಲ್ಲರಲ್ಲೂ ಬಂದೇ ಬರುತ್ತದೆ. ವರದಿಗಳ ಪ್ರಕಾರ ಈ ಕಾರು ಸುಮಾರು 13,700 ಡಾಲರ್‌ (ಸುಮಾರು 10 ಲಕ್ಷ ರೂಪಾಯಿ)ಗೆ ಲಭ್ಯವಾಗಬಹುದು ಎನ್ನಲಾಗಿದೆ. ಪ್ರಸ್ತುತ ಭಾರತದ ರಸ್ತೆಗಳಲ್ಲಿ ವ್ಯಾಗನ್‌-ಆರ್‌ ಕಾರಿಗೆ ಈ ಹೊಸ ತಂತ್ರಜ್ಞಾನದ ಪ್ರಯೋಗ ನಡೆಸಲಾಗುತ್ತಿದೆ. ಇದಕ್ಕೆ 10ರಿಂದ 25 ಕಿ.ವಾ. ಲಿಥಿಯಂ ಅಯಾನ್‌ ಬ್ಯಾಟರಿ ಬಳಸಲಾಗುತ್ತಿದೆ. ಒಂದು ವೇಳೆ ಈ ತಂತ್ರಜ್ಞಾನ ಯಶಸ್ವಿಯಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ.

Vinkmag ad

Read Previous

Jayanagar General Hospital Upgrades Critical Care Infrastructure Through the MillionICU Initiative by Dozee50 Step-Down ICU beds installed to create smart wards; facilitating continuous critical care for 1000+ patients over the next 6 months

Read Next

BSNL 4G ಮೂಲಕ ಮೊದಲ ಕರೆ ಮಾಡಿದ ಅಶ್ವಿನಿ ವೈಷ್ಣವ್; ಆತ್ಮನಿರ್ಭರ ಭಾರತ ನನಸಾಗುತ್ತಿದೆ ಎಂದ ಸಚಿವ

Leave a Reply

Your email address will not be published. Required fields are marked *

14 − five =

Most Popular