National News Analysis

23 May 2024, 17:35 PM

ಕಂಗನಾ ರಣಾವತ್ ಹೇಳಿಕೆಗೆ ವ್ಯಾಪಕ ವಿರೋಧ

ಮೂರನೇ ಮಗು ಹೊಂದಿದವರನ್ನು ಜೈಲಿಗೆ ರವಾನಿಸಿ: ಕಂಗನಾ ಪ್ರಜಾವಾಣಿ ವೆಬ್ ಡೆಸ್ಕ್‌ ಏಪ್ರಿಲ್    ಕಂಗನಾ ರಣಾವತ್ ಮುಂಬೈ: ಜನಸಂಖ್ಯೆ ನಿಯಂತ್ರಣಕ್ಕೆ ದೇಶದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಮೂರನೇ ಮಗು ಹೊಂದಿದರೆ ಜೈಲಿಗೆ ರವಾನಿಸಬೇಕು ಎಂದು ಹೇಳಿದ್ದಾರೆ. ಕಂಗನಾ ರಣಾವತ್ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜನಸಂಖ್ಯೆ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸಬೇಕು. ವೋಟ್ ರಾಜಕಾರಣದಿಂದ ಬೇಸತ್ತು ಹೋಗಿದ್ದೇವೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಪ್ರಯತ್ನಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಬಲವಂತವಾಗಿ ಜನರ ಸಂತಾನಶಕ್ತಿ ಹರಣಗೊಳಿಸಲು ಮುಂದಾಗಿದ್ದರು. ಆದರೆ ಬಳಿಕ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇಂದಿನ ಬಿಕ್ಕಟ್ಟನ್ನು ಗಮನಿಸಿದಾಗ ಕನಿಷ್ಠ ಮೂರನೇ ಮಗು ಹೊಂದಿದರೆ ದಂಡ ಅಥವಾ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

Vinkmag ad

Read Previous

ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಹೋಮ್ ಕ್ವಾರಂಟೈನ್ ಆಗಲು ವೈದ್ಯರು ಸಲಹೆ ನೀಡಿದ್ದಾರೆ

Read Next

jain association free of covid Vaccine in Jayanagara

Leave a Reply

Your email address will not be published. Required fields are marked *

eleven + 6 =

Most Popular