National News Analysis

12 September 2024, 13:44 PM

ರಾಜ್ಯಬಿಡಿಎ ಒಂದ್ಸಲ ಸಂಪೂರ್ಣ ಸ್ವಚ್ಛವಾಗಬೇಕು: ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಡಿಎ ಒಂದ್ಸಲ ಸಂಪೂರ್ಣ ಸ್ವಚ್ಛ ಮಾಡಿ ಅದನ್ನು ಮುಖ್ಯವಾಹಿನಿಗೆ ತರುವ ವ್ಯವಸ್ಥೆ ಮಾಡುವ ಮೂಲಕ ನಾಗರೀಕರಿಗೆ ಸೇವೆ ಸಮರ್ಪಕವಾಗಿ ಸಿಗುವ ಕೆಲಸ ಮಾಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಆರ್.ಟಿ.ನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಬಿಡಿಎ ದಾಳಿ ಬಗ್ಗೆ ಎಸಿಬಿ ವರದಿ ಶಿಫಾರಸು ಮೇರೆಗೆ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳಲಿದೆ .ನಮ್ಮ ಸರ್ಕಾರ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹಿಂದೆಯೇ ಹೇಳಿದ್ದೇನೆ. ಬಿಡಿಎನಲ್ಲಿ ಯಾರನ್ನೂ ರಕ್ಷಿಸುವ ಕೆಲಸ ಮಾಡುವುದಿಲ್ಲ. ಬಿಡಿಎ ಭ್ರಷ್ಟಾಚಾರಗಳ ಬಗ್ಗೆ ವಿಶ್ವನಾಥ್ ತಮಗೆ ಮಾಹಿತಿ ನೀಡಿದ್ದರು.ಯಾವುದೇ ಅಧಿಕಾರಿ ತಪ್ಪಿತಸ್ಥ ಇದ್ದರೂ ಅಂತವರ ವಿರುದ್ಧ ಕ್ರಮ ಖಚಿತ ಎಂದು‌ ಸ್ಪಷ್ಟಪಡಿಸಿದರು.

ಬೆಂಗಳೂರಿನ ಮೇಲೆ ನಮಗೆ ವಿಶೇಷ ಕಾಳಜಿ ಇದೆ. ನಾನೂ ಕೂಡಾ ಹಲವು ಕಡೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೆ. ಮುಂದೆಯೂ ಹೋಗ್ತೇನೆ. ಮಳೆ ಮುಗಿದ ಮೇಲೆ ದುರಸ್ತಿ ಕಾಮಗಾರಿಗಳನ್ನು ನಡೆಸುತ್ತೇವೆಂದು ತಿಳಿಸಿದ್ದಾರೆ.

Vinkmag ad

Read Previous

SPOC DECIDES TO PREVENT CANCER AND ORGANISED SCIENTIFIC CONFERENCE IN BENGSLURU

Read Next

City Link partners with Piaggio to expand its electric three-wheeler fleet

Leave a Reply

Your email address will not be published. Required fields are marked *

seven + 12 =

Most Popular