ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೂ ಮುನ್ನ ಆರ್‌ಸಿಬಿ ನೆಟ್ಸ್‌ನಲ್ಲಿ ಒಮ್ಮೆ ಡ್ಯೂಕ್ ಬಾಲ್‌ನಲ್ಲಿ ಬೌಲಿಂಗ್ ಮಾಡಿ ಎಂದ ಕೊಹ್ಲಿ ಮನವಿಯನ್ನು ಕಿವೀಸ್ ವೇಗಿ ಕೈಲ್ ಜೇಮಿಸನ್ ನಿರಾಕರಿಸಿದ್ದಾರೆ.
ಹೈಲೈಟ್ಸ್:
- ಪ್ರಸ್ತುತ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್.
- ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು.
- ಡ್ಯೂಕ್ ಬಾಲ್‌ನಲ್ಲಿ ಕೊಹ್ಲಿಗೆ ಬೌಲಿಂಗ್ ಮಾಡಲು ನಿರಾಕರಿಸಿದ ಕೈಲ್ ಜೇಮಿಸನ್.
ಅಹ್ಮದಾಬಾದ್: ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಹಾಗೂ ಕೇನ್ ವಿಲಿಯಮ್ಸನ್ ನಾಯಕತ್ವ ನ್ಯೂಜಿಲೆಂಡ್ ತಂಡಗಳು ಇಂಗ್ಲೆಂಡ್‌ನಲ್ಲಿ ಜೂನ್ 18ರಿಂದ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಹಣಾಹಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಹಾಗಾಗಿ 2021ರ ಆವೃತ್ತಿಯ ಐಪಿಎಲ್ ಟೂರ್ನಿಯ ಬಳಿಕ ಎರಡೂ ತಂಡಗಳು ಇಂಗ್ಲೆಂಡ್‌ಗೆ ಪ್ರವಾಸ ಮಾಡಲಿವೆ.
ನ್ಯೂಜಿಲೆಂಡ್ ತಂಡ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಅರ್ಹತಾ ಪಂದ್ಯಗಳನ್ನು ತನ್ನ ತವರಿನಲ್ಲಿಯೇ ಮುಗಿಸಿತ್ತು. ಆದರೆ, ಭಾರತ ತಂಡ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳನ್ನು ಕಳೆದ ಎರಡು ಟೆಸ್ಟ್ ಸರಣಿಗಳಲ್ಲಿ ಮಣಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿತ್ತು.
ಭಾರತ 2-1 ಅಂತರದಲ್ಲಿ ಆಸ್ಟ್ರೇಲಿಯಾವನ್ನು ಅವರದೇ ನೆಲದಲ್ಲಿ ಮಣಿಸಿದ್ದರೆ, 3-1 ಅಂತರದಲ್ಲಿ ಇಂಗ್ಲೆಂಡ್ ತಂಡವನ್ನು ತವರು ಮಣ್ಣಿಯಲ್ಲಿ ಸೋಲಿಸಿತ್ತು. ಆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ಸ್‌ಗೆ ಅರ್ಹತೆ ಪಡೆದ ಎರಡನೇ ತಂಡವಾಗಿದೆ.
ಪಂಜಾಬ್ ವಿರುದ್ಧ ಇಂದಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ..
ನ್ಯೂಜಿಲೆಂಡ್‌ನ ಹಲವು ಆಟಗಾರರು ಹಾಗೂ ಭಾರತ ತಂಡದ ಆಟಗಾರರು ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿವಿಧ ತಂಡಗಳ ಪರ ಆಡುತ್ತಿದ್ದಾರೆ. ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತಮ್ಮ ಜೊತೆಯಲ್ಲಿಯೇ ಇರುವ ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್ ಅವರನ್ನು ಎದುರಿಸಲು ಪ್ರಯತ್ನಿಸುತ್ತಿದ್ದಾರೆ.
ಭಾರತ ಹಾಗೂ ನ್ಯೂಜಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ಸ್ ಸಲುವಾಗಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಸಹ ಆಟಗಾರ ನ್ಯೂಜಿಲೆಂಡ್ ಕೈಲ್ ಜೇಮಿಸನ್ ಅವರ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ, ಇನ್ನೂ ಕೊಹ್ಲಿ ಯೋಜನೆ ಸಕಾರವಾಗಿಲ್ಲ ಎಂಬುದನ್ನು ಆರ್‌ಸಿಬಿ ಆಲ್‌ರೌಂಡರ್ ಡ್ಯಾನ್ ಕ್ರಿಸ್ಟಿಯನ್ ಬಹಿರಂಗಪಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ಕೋಟಿ ರೂ. ಗಳಿಗೆ ಖರೀದಿಸಿರುವ ಕೈಲ್ ಜೇಮಿಸನ್ ಅವರು ಐಪಿಎಲ್ ಬರುವಾಗ ಕೆಲ ಡ್ಯೂಕ್ ಬಾಲ್‌ಗಳನ್ನು ಭಾರತಕ್ಕೆ ತಂದಿದ್ದಾರೆ. ಏಕೆಂದರೆ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಹಣಾಹಣಿಯಲ್ಲಿ ಈ ಚೆಂಡುಗಳನ್ನು ಬಳಸಲಾಗುತ್ತದೆ ಎಂದು ಡ್ಯಾನ್ ಕ್ರಿಸ್ಟಿಯನ್ ಹೇಳಿದರು
ಆರ್‌ಸಿಬಿ ನೆಟ್ಸ್‌ನಲ್ಲಿ ಕೈಲ್ ಜೇಮಿಸನ್ ಅವರಿಂದ ಡ್ಯೂಕ್ ಬಾಲ್‌ನಲ್ಲಿ ಬ್ಯಾಟಿಂಗ್ ಮಾಡಲು ನಾಯಕ ವಿರಾಟ್ ಕೊಹ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಇದಕ್ಕೆ ಕಿವೀಸ್ ವೇಗಿ ಕೈಲ್ ಜೇಮಿಸನ್, ಟೀಮ್ ಇಂಡಿಯಾ ನಾಯಕನ ಉಪಾಯಕ್ಕೆ ಇನ್ನೂ ಮಣಿದಿಲ್ಲ ಎಂದು ಕ್ರಿಸ್ಟಿಯನ್ ತಿಳಿಸಿದರು
“ಐಪಿಎಲ್ ಟೂರ್ನಿಗೆ ಬಂದ ಆರಂಭಿಕ ವಾರದಿಂದ ನಾವು ಇಲ್ಲಿದ್ದೇವೆ. ನೆಟ್ಸ್ ಮುಗಿದ ಬಳಿಕ ನಾನು, ಕೊಹ್ಲಿ, ಜೇಮಿಸನ್ ಒಂದು ಹತ್ತಿರ ಕುಳಿತು, ಟೆಸ್ಟ್ ಕ್ರಿಕೆಟ್ ಬಗ್ಗೆ ಮಾತನಾಡುತ್ತಿದ್ದೆವು. ವಿರಾಟ್ ಕೊಹ್ಲಿ: ‘ಜೇಮಿ ನೀವು ಡ್ಯೂಕ್ ಬಾಲ್‌ಗಳಲ್ಲಿ ಹೆಚ್ಚು ಬೌಲಿಂಗ್ ಮಾಡಿದ್ದೀರಾ? ಎಂದು ಕೇಳಿದರು.
ಎಬಿಡಿ ‘ಕಣ್ಮುಚ್ಚಿ ಬ್ಯಾಟಿಂಗ್ ಮಾಡಬೇಕು’ ಎಂದ ಆಕಾಶ್ ಚೋಪ್ರಾ!
ಇದಕ್ಕೆ ಜೇಮಿ: ‘ಹೌದು, ಕೆಲ ಡ್ಯೂಕ್ ಬಾಲ್‌ಗಳು ನನ್ನ ಬಳಿ ಇವೆ. ಐಪಿಎಲ್ ಮುಗಿದು ಇಂಗ್ಲೆಂಡ್‌ಗೆ ತೆರಳುವ ಮುನ್ನ ಈ ಚೆಂಡುಗಳಲ್ಲಿ ಅಭ್ಯಾಸ ನಡೆಸುತ್ತೇನೆ ವಿರಾಟ್’ ಎಂದರು. ಅದಕ್ಕೆ ಕೊಹ್ಲಿ, ‘ಓಹ್, ನೀವು ನನಗೆ ನೆಟ್ಸ್‌ನಲ್ಲಿ ಡ್ಯೂಕ್ ಬಾಲ್‌ನಲ್ಲಿ ಬೌಲಿಂಗ್ ಮಾಡುತ್ತೀರಾ? ನಿಮ್ಮ ಬೌಲಿಂಗ್ ಎದುರಿಸಲು ನನಗೆ ತುಂಬಾ ಖುಷಿ ಇದೆ,’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜೇಮಿ,’ನೋ ಚಾನ್ಸ್, ನಿಮಗೆ ನಾನು ಬೌಲಿಂಗ್ ಮಾಡಲ್ಲ!’ಎಂದು ಕಡ್ಡಿ ಮುರಿದಂತೆ ನಿರಾಕರಿಸಿದರು. ಕೈಲ್ ಜೇಮಿಸನ್ ಅವರು ಡ್ಯೂಕ್ ಬಾಲ್‌ನಲ್ಲಿ ರಿಲೀಸ್ ಪಾಯಿಂಟ್ ನೋಡುತ್ತಾರೆ ಹಾಗೂ ಎಲ್ಲಾ ರೀತಿಯಲ್ಲೂ ಅವರು ಡ್ಯೂಕ್ ಬಾಲ್‌ನಲ್ಲಿ ಬೌಲಿಂಗ್ ಮಾಡುತ್ತಾರೆ,” ಎಂದು ಕ್ರಿಸ್ಟಿಯನ್ ಗ್ರೇಡ್ ಕ್ರಿಕೆಟರ್ ಯೂಟ್ಯೂಬ್ ಚಾನೆಲ್‌ಗೆ ಹೇಳಿದ್ದಾರೆ.