National News Analysis

12 September 2024, 15:19 PM

BSNL: 450 ರೂ.ಗಿಂತ ಕಡಿಮೆ ಬೆಲೆಯಲ್ಲಿ ಪಡೆಯಿರಿ 3300 ಜಿಬಿ ಡೇಟಾ

ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್‌ನ ಈ ಫೈಬರ್ ಪ್ಲಾನ್ ಆಫರ್ ಅಡಿಯಲ್ಲಿ ಬಳಕೆದಾರರು 30 ಎಮ್‌ಬಿಪಿಎಸ್ ವೇಗವನ್ನು ಪಡೆಯುತ್ತಾರೆ. ಅಲ್ಲದೆ, ಮೂರು ತಿಂಗಳಲ್ಲಿ ಒಟ್ಟು 3300 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಈ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ದೂರವಾಣಿ ಸಂಪರ್ಕವನ್ನು ಸಹ ಒದಗಿಸಲಾಗುತ್ತಿದೆ. ಈ ಫೋನ್‌ನಿಂದ ನೀವು ಯಾವುದೇ ನೆಟ್‌ವರ್ಕ್‌ನಲ್ಲಿ ಮೂರು ತಿಂಗಳವರೆಗೆ ಅನಿಯಮಿತ ಉಚಿತ ಕರೆ ಸೌಲಭ್ಯವನ್ನು ಪಡೆಯಬಹುದಾಗಿದೆ. Subscribe to updates ನವದೆಹಲಿ: ಕರೋನಾ ಯುಗ ಒಂದರ್ಥದಲ್ಲಿ ವರ್ಕ್ ಫ್ರಮ್ ಹೋಂ ಸಂಸ್ಕೃತಿಗೆ ದಾರಿಮಾಡಿಕೊಟ್ಟಿದೆ.  ಇದರಿಂದಾಗಿ ಕ್ರಮೇಣ ಇಂಟರ್ನೆಟ್ ಬೇಡಿಕೆಯೂ ಹೆಚ್ಚಾಗಿದೆ. ಈ ಮಧ್ಯೆ ಏರ್‌ಟೆಲ್ ( Airtel), ಜಿಯೋ (Jio) ಮತ್ತು ವಿ (Vi)ನಂತಹ ಖಾಸಗಿ ಆಪರೇಟರ್‌ಗಳಿಗೆ ಟಕ್ಕರ್ ನೀಡಿರುವ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಅಗ್ಗದ ದರದಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲು  ಧನ್ಸು ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಸಂಪರ್ಕದಲ್ಲಿ ಸಾಕಷ್ಟು ಕೊಡುಗೆಗಳನ್ನುನೀಡಲಾಗುತ್ತಿದೆ. ವಿಶೇಷ ವಿಷಯವೆಂದರೆ ಕೇವಲ 450 ರೂ.ಗಿಂತ ಕಡಿಮೆ ದರದಲ್ಲಿ ಈ ಸೌಲಭ್ಯ ಸಿಗುತ್ತಿದೆ.  ಹೊಸ ಬ್ರಾಡ್‌ಬ್ಯಾಂಡ್ ಯೋಜನೆ: ಟೆಕ್ ಸೈಟ್ ಕೆರಾಲೆಟೆಲೆಕಾಮ್ (keralatelecom) ಪ್ರಕಾರ, ಬಿಎಸ್ಎನ್ಎಲ್ ಭಾರತ್ ಫೈಬರ್ (FTTH) ಬ್ರಾಡ್ಬ್ಯಾಂಡ್ ಅಡಿಯಲ್ಲಿ ಫೈಬರ್ ಬೇಸಿಕ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಬೆಲೆ 449 ರೂಪಾಯಿ. ಈ ಯೋಜನೆಯಲ್ಲಿ 90 ದಿನಗಳವರೆಗೆ ಉತ್ತಮ ಕೊಡುಗೆಗಳು ಲಭ್ಯವಿದೆ. ಇದನ್ನೂ ಓದಿ – ಈ App ಇದ್ದರೆ ಸುಲಭವಾಗಿ ಪತ್ತೆ ಮಾಡಬಹುದು ಕಳೆದುಹೋದ Gadget ಉಚಿತ ಇನ್ಸ್ಟಾಲೇಶನ್: ಬಿಎಸ್‌ಎನ್‌ಎಲ್‌ನ (BSNL) ಈ ಬ್ರಾಡ್‌ಬ್ಯಾಂಡ್ ಸಂಪರ್ಕದ ವಿಶೇಷ ಪ್ರಯೋಜನವೆಂದರೆ ಗ್ರಾಹಕರು ಸಂಪರ್ಕವನ್ನು ಪಡೆಯಲು ಯಾವುದೇ ಇನ್ಸ್ಟಾಲೇಶನ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇನ್ಸ್ಟಾಲೇಶನ್ ಸಂಪೂರ್ಣ ಉಚಿತವಾಗಿರುತ್ತದೆ. 3300 ಜಿಬಿ ಡೇಟಾ ಪಡೆಯಲಾಗುತ್ತಿದೆ : ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್‌ನ ಈ ಫೈಬರ್ ಪ್ಲಾನ್ ಆಫರ್ ಅಡಿಯಲ್ಲಿ ಬಳಕೆದಾರರು 30 ಎಮ್‌ಬಿಪಿಎಸ್ ವೇಗವನ್ನು ಪಡೆಯುತ್ತಾರೆ. ಇದಲ್ಲದೆ, ಮೊದಲ ಮೂರು ತಿಂಗಳವರೆಗೆ 3300 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಅನಿಯಮಿತ ಕರೆ ಸೌಲಭ್ಯ: ಈ ಬ್ರಾಡ್‌ಬ್ಯಾಂಡ್ (BSNL Broadband) ಸಂಪರ್ಕದೊಂದಿಗೆ ದೂರವಾಣಿ ಸಂಪರ್ಕವನ್ನು ಸಹ ಒದಗಿಸಲಾಗುತ್ತಿದೆ. ಈ ಫೋನ್‌ನಿಂದ ನೀವು ಯಾವುದೇ ನೆಟ್‌ವರ್ಕ್‌ನಲ್ಲಿ ಮೂರು ತಿಂಗಳವರೆಗೆ ಅನಿಯಮಿತ ಉಚಿತ ಕರೆ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದನ್ನೂ ಓದಿ – BSNL Plans : ಕೇವಲ 47 ಪ್ಲಾನ್ ನಲ್ಲಿ ಸಿಗಲಿದೆ unlimited calls ಜೊತೆ ಪ್ರತಿದಿನ 1 GB Data ಆಫರ್ ಮೂರು ತಿಂಗಳು ಮಾತ್ರ : ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬ್ಯಾಂಡ್ ಸಂಪರ್ಕದಲ್ಲಿನ ಈ ಎಲ್ಲಾ ಕೊಡುಗೆಗಳು ಕೇವಲ ಮೂರು ತಿಂಗಳು ಮಾತ್ರ ಮಾನ್ಯವಾಗಿರುತ್ತದೆ. ಸಿಂಧುತ್ವ ಮುಗಿದ ನಂತರ, ಬಳಕೆದಾರರು ಪ್ರತಿ ತಿಂಗಳು 599 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಬಿಎಸ್‌ಎನ್‌ಎಲ್‌ನ ಈ ಕೊಡುಗೆ ಹೊಸದಲ್ಲ ಎಂಬುದು ಗಮನಾರ್ಹ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕಂಪನಿಯು ಅಂತಹ ಯೋಜನೆಯನ್ನು ಹೊರತಂದಿತ್ತು. ಅಗ್ಗದ ದರದ ಕಾರಣ, ಈ ಯೋಜನೆ ದೇಶಾದ್ಯಂತ ಜನಪ್ರಿಯವಾಗಿತ್ತು. ಈ ದಿನಗಳಲ್ಲಿ ವರ್ಕ್ ಫ್ರಮ್ ಹೋಂ ಮತ್ತು ಆನ್‌ಲೈನ್ ತರಗತಿಯಿಂದಾಗಿ ಬ್ರಾಡ್‌ಬ್ಯಾಂಡ್ ಸಂಪರ್ಕದ ಬೇಡಿಕೆ ಹೆಚ್ಚಾಗಿದೆ. ಈ ಹೊಸ ಕೊಡುಗೆ ದೇಶಾದ್ಯಂತ ತಮ್ಮ ಗ್ರಾಹಕರನ್ನು ಹೆಚ್ಚಿಸುತ್ತದೆ ಎಂದು ಬಿಎಸ್‌ಎನ್‌ಎಲ್ ಆಶಿಸಿದೆ. ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ… Android Link – https://bit.ly/3hDyh4G Apple Link – https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Vinkmag ad

Read Previous

Ingestible Beauty: New Study Investigates the Effects of Daily Almond Consumption on Facial Wrinkles and Skin PigmentationResearch shows reduced measures of wrinkle severity and improved pigment intensity in postmenopausal women with Fitzpatrick skin types I-II who ate almonds as a daily snack

Read Next

MANIPAL HOSPITALS TO DIVEST ITS STAKE IN KLANG, MALAYSIA TO RAMSAY SIME DARBY HEALTHCARE (RSDH)Bangalore

Leave a Reply

Your email address will not be published. Required fields are marked *

nineteen − 11 =

Most Popular