National News Analysis

23 May 2024, 18:27 PM

BSNL 4G ಮೂಲಕ ಮೊದಲ ಕರೆ ಮಾಡಿದ ಅಶ್ವಿನಿ ವೈಷ್ಣವ್; ಆತ್ಮನಿರ್ಭರ ಭಾರತ ನನಸಾಗುತ್ತಿದೆ ಎಂದ ಸಚಿವ

BSNL Network: ಬಿಎಸ್​ಎನ್​ಎಲ್ 4ಜಿ ಭಾರತದ ಹಲವು ಪ್ರದೇಶಗಳಲ್ಲಿ ಚಾಲ್ತಿಯಲ್ಲಿ ಇದೆ. ಹಾಗೂ ಡಿಸೆಂಬರ್ 31 ರ ವರೆಗೆ ಗ್ರಾಹಕರಿಗೆ ಉಚಿತ 4ಜಿ ಸಿಮ್​ನ್ನು ಬಿಎಸ್​ಎನ್​ಎಲ್ ನೀಡುತ್ತಿದೆ.

null

BSNL 4G ಮೂಲಕ ಮೊದಲ ಕರೆ ಮಾಡಿದ ಅಶ್ವಿನಿ ವೈಷ್ಣವ್; ಆತ್ಮನಿರ್ಭರ ಭಾರತ ನನಸಾಗುತ್ತಿದೆ ಎಂದ ಸಚಿವ

ಅಶ್ವಿನಿ ವೈಷ್ಣವ್

ದೆಹಲಿ: ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಬಿಎಸ್​ಎನ್​ಎಲ್ 4ಜಿ ನೆಟ್​ವರ್ಕ್​ನ (BSNL 4G Network) ಮೊದಲ ಫೋನ್ ಕಾಲ್ ಮಾಡಿದರು. ಈ ಬಗ್ಗೆ, ಅವರು ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ ಎಂದು ಬರೆದುಕೊಂಡಿದ್ದಾರೆ. ಬಿಎಸ್​ಎನ್​ಎಲ್ 4ಜಿ ಭಾರತದ ಹಲವು ಪ್ರದೇಶಗಳಲ್ಲಿ ಚಾಲ್ತಿಯಲ್ಲಿ ಇದೆ. ಹಾಗೂ ಡಿಸೆಂಬರ್ 31 ರ ವರೆಗೆ ಗ್ರಾಹಕರಿಗೆ ಉಚಿತ 4ಜಿ ಸಿಮ್​ನ್ನು ಬಿಎಸ್​ಎನ್​ಎಲ್ ನೀಡುತ್ತಿದೆ.

ಇದು ಭಾರತದ್ದೇ ಆದ ಮೊದಲ 4ಜಿ ನೆಟ್​ವರ್ಕ್ ಆಗಿದೆ. ಇದರ ಅಭಿವೃದ್ಧಿ ಅಥವಾ ರೋಲ್​ಔಟ್ ಸರಳ, ಸುಲಭ ಆಗಿರಲಿಲ್ಲ. ವರದಿಗಳು ಹೇಳುವಂತೆ ಬಿಎಸ್​ಎನ್​ಎಲ್ ರೋಲ್​ಔಟ್​ನ ಮುಂದಿನ ಹಂತಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕೂಡ ಯೋಜನೆಯ ಸಹಭಾಗಿತ್ವ ಹೊಂದಬಹುದು. ಬಿಎಸ್​ಎನ್​ಎಲ್ ತನ್ನ 4ಜಿ ನೆಟ್​ವರ್ಕ್​ಗಾಗಿ ಇಂಡಿಯನ್ ಟೆಕ್ನಾಲಜಿ ಜೊತೆಗೆ ಕೆಲವು ಕಾಲದಿಂದ ಕೆಲಸ ಮಾಡುತ್ತಿದೆ.https://66e25e2ceefcca48ff1f8aab7a62dae4.safeframe.googlesyndication.com/safeframe/1-0-38/html/container.html?n=0

ಐಟಿ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಬಿಎಸ್​ಎನ್​ಎಲ್ ಭಾರತೀಯ 4ಜಿ ನೆಟ್​ವರ್ಕ್ ಮೂಲಕ ಮೊದಲ ಕರೆ ಮಾಡಿದರು. ಕೇಂದ್ರ ಸರ್ಕಾರ 4ಜಿ ಸೇವೆಗಳಿಗಾಗಿ 24,084 ಕೋಟಿ ರೂಪಾಯಿಗಳನ್ನು 2021-22 ರ ಬಜೆಟ್​ನಲ್ಲಿ ಮೀಸಲಿರಿಸಿದೆ. ಇದು ಒಟ್ಟಾರೆ 69,000 ಕೋಟಿ ರೂಪಾಯಿಯ ಬಿಎಸ್​ಎನ್​ಎಲ್ ಹಾಗೂ ಎಮ್​ಟಿಎನ್​ಎಲ್ ಪ್ಯಾಕೇಜ್​ನ ಭಾಗವಾಗಿದೆ.

ಬಿಎಸ್​ಎನ್​ಎಲ್​ ಈ ಹಣಕಾಸು ವರ್ಷದಲ್ಲಿ 4ಜಿ ನೆಟ್​ವರ್ಕ್ ಕಾರ್ಯಾರಂಭಿಸಿದ್ದರೆ, ಅದರ ಆರ್​-ಡಿ ಆರ್ಗನೈಸೇಷನ್ ಸಿ-ಡಾಟ್​ಗೆ 6ಜಿ ನೆಟ್​ವರ್ಕ್ ಟೆಕ್ನಾಲಜಿ ಮೇಲೆ ಕೆಲಸ ಮಾಡಲು ಟೆಲಿಕಾಂ ಡಿಪಾರ್ಟ್​ಮೆಂಟ್ ಸೂಚಿಸಿದೆ. ಆ ಮೂಲಕ ಭವಿಷ್ಯದ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡಲು ಹಾಗೂ ಜಾಗತಿಕ ಮಾರುಕಟ್ಟೆಯೊಂದಿಗೆ ಬೆಳೆಯಲು ಹೇಳಲಾಗಿದೆ. ಸ್ಯಾಮ್​ಸಂಗ್, ಹುವಾಯಿ, ಎಲ್​ಜಿ ಮತ್ತು ಇತರ ಕೆಲವು ಕಂಪೆನಿಗಳು 6ಜಿ ಟೆಕ್ನಾಲಜಿಗಾಗಿ ಕೆಲಸ ಮಾಡುತ್ತಿವೆ ಎಂದು ಹೇಳಲಾಗಿದೆ. 6ಜಿ ತಂತ್ರಜ್ಞಾನವು 5ಜಿ ಗಿಂತ 50 ಪಟ್ಟು ವೇಗವಾಗಿ ಇರಲಿದೆ ಎನ್ನಲಾಗಿದೆ. ಈ ತಂತ್ರಜ್ಞಾನ 2028- 2030 ರ ವೇಳೆಗೆ ವಾಣಿಜ್ಯ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ.

Vinkmag ad

Read Previous

ಈ ಕಾರಿಗೆ ಪೆಟ್ರೋಲ್‌, ಡೀಸೆಲ್‌ ಬೇಡವೇ ಬೇಡ, ಚಾರ್ಜೂ ಹಾಕಂಗಿಲ್ಲ! ಮಾರುತಿ ಸುಜುಕಿಯಿಂದ ಅದ್ಭುತ ಪ್ರಯೋಗ!

Read Next

Aakash Institute’s National Scholarship, ANTHE 2021, Offers Upto 100% Scholarship to Class VII-XII Students; 5 Students across grades along with one parent will get a free trip to NASA ANTHE, Aakash Institute’s national scholarship exam, meant for students of Class VII-XII, will be held between December 4—12, 20215 Students across Grades along with one parent will get a chance to visit NASASince 2010, ANTHE has offered scholarships to more than 23 lakh students.· Apart from the scholarship, students will also get the Meritnation School Booster Course free of cost.For more details, please log in to https://anthe.aakash.ac.in/antheANTHE, Aakash Institute’s national scholarship exam, meant for students of Class VII-XII, will be held between December 4—12, 20215 Students across Grades along with one parent will get a chance to visit NASASince 2010, ANTHE has offered scholarships to more than 23 lakh students.· Apart from the scholarship, students will also get the Meritnation School Booster Course free of cost.For more details, please log in to https://anthe.aakash.ac.in/anthe

Leave a Reply

Your email address will not be published. Required fields are marked *

ten + 17 =

Most Popular