National News Analysis

12 September 2024, 15:49 PM

LPG Cylinderನಲ್ಲಿ ಎಷ್ಟು ಗ್ಯಾಸ್ ಬಾಕಿ ಉಳಿದಿದೆ ತಿಳಿದುಕೊಳ್ಳಲು ಇಲ್ಲಿದೆ ಸುಲಭ ಉಪಾಯ

ನಿಮ್ಮ ಅಡುಗೆ ಮನೆಯಲ್ಲಿರುವ ಗ್ಯಾಸ್ (LPG) ಸಿಲಿಂಡರ್ ನಲ್ಲಿ ಎಷ್ಟು ಗ್ಯಾಸ್ ಬಾಕಿ ಉಳಿದಿದೆ ಎಂಬುದನ್ನು ಇನ್ಮುಂದೆ ಅತ್ಯಂತ ಸುಲಭವಾಗಿ ಪತ್ತೆಹಚ್ಚಬಹುದು. ಏಕೆಂದರೆ, ಇಂತಹ ಒಂದು ಅದ್ಭುತ ಟ್ರಿಕ್ ಅನ್ನು ನಾವು ನಿಮಗೆ ಹೇಳಲು ಹೊರಟಿದ್ದು, ಈ ಟ್ರಿಕ್ ಬಳಸಿ ನೀವೂ ಕೂಡ ನಿಮ್ಮ ಅಡುಗೆ ಮನೆಯಲ್ಲಿರುವ ಗ್ಯಾಸ್ ಸಿಲಿಂಡರ್ ನಲ್ಲಿ ಬಾಕಿ ಇರುವ ಗ್ಯಾಸ್ ಕುರಿತು ತಿಳಿಯಬಹುದು. ನವದೆಹಲಿ: How To Check Remaining Gas In LPG Cylinder – ಒಂದು ವೇಳೆ ನಿಮ್ಮ ಮನೆಗೂ ಕೂಡ ಅತಿಥಿಗಳು ಬಂದಿದ್ದು, ನಿಮ್ಮ ಮನೆಯಲ್ಲಿರುವ ಅಡುಗೆ ಅನಿಲದ ಸಿಲಿಂಡರ್ (LPG Cylinder) ಖಾಲಿಯಾದರೆ ನೀವೇನು ಮಾಡುವಿರಿ? ಇಂತಹ ಒಂದು ಪ್ರಶ್ನೆ ಮನಸ್ಸಿ ನಲ್ಲಿ ಬಂದರೆ, ತರೆಹೆವಾರಿ ಉತ್ತರಗಳು ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಹೀಗಾಗಿ ಇಂದು ನಾವು ನಿಮಗೆ ಉಪಾಯವೊಂದನ್ನು ಹೇಳುತ್ತಿದ್ದು, ಈ ಉಪಾಯವನ್ನು ಬಳಸಿ ನೀವು ಸಮಯ ಇರುವಾಗಲೇ ನಿಮ್ಮ ಅಡುಗೆ ಅನಿಲ ಸಿಲಿಂಡರ್ ನಲ್ಲಿ ಬಾಕಿ ಉಳಿದಿರುವ ಅನಿಲದ ಕುರಿತು ಮುಂಚಿತವಾಗಿಯೇ ತಿಳಿದುಕೊಳ್ಳಬಹುದು.

ಆದರೆ, ಇದರಿಂದ ಕೇವಲ ನೀವು ಅಂದಾಜಿಸಬಹುದು
ಕೆಲವರು ತಮ್ಮ ಮನೆಯಲ್ಲಿರುವ ಸಿಲಿಂಡರ್ ಅನ್ನು ಎತ್ತುವ ಮೂಲಕ ಮತ್ತು ಅದರ ಭಾರದ ಆಧಾರದ ಮೇಲೆ ಸಿಲಿಂಡರ್ ನಲ್ಲಿರುವ ಗ್ಯಾಸ್ (Gas In Cylinder) ಕುರಿತು ಅಂದಾಜಿಸುತ್ತಾರೆ. ಕೆಲವರು ಒಲೆಯ ಮೂಲಕ ಬರುವ ಜ್ವಾಲೆಯ ನೀಲಿ ಅಥವಾ ಹಳದಿ ಬಣ್ಣವನ್ನು ನೋಡಿ ಸಿಲಿಂಡರ್ ನಲ್ಲಿರುವ ಗ್ಯಾಸ್ ಬಗ್ಗೆ ಅಂದಾಜಿಸುತ್ತಾರೆ. ಆದರೆ, ಇದು ಕೇವಲ ಅಂದಾಜು ಇರುತ್ತದೆ ಮತ್ತು ನಿಖರವಾದ ಮಾಹಿತಿಯಾಗಿರುವುದಿಲ್ಲ. ಏಕೆಂದರೆ, ಸ್ಟೋವ್ ಬರ್ನರ್ನಲ್ಲಿ ತಾಂತ್ರಿಕ ತೊಂದರೆ ಇದ್ದರೂ ಕೂಡ ಬೆಂಕಿಯ ಬಣ್ಣ ಬದಲಾಗುತ್ತದೆ. ಆದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ವಿಧಾನದಿಂದ ನೀವು ನಿಖರ ಮಾಹಿತಿಯನ್ನು ಪಡೆಯಬಹುದು.

ಏನಿದು ನಿಖರ ಮತ್ತು ಸುಲಭ ವಿಧಾನ
ಒದ್ದೆಯಾಗಿರುವ ಒಂದು ಬಟ್ಟೆಯ (Wet Cloth) ಸಹಾಯದಿಂದ ನೀವು ನಿಮ್ಮ ಸಿಲಿಂಡರ್ ನಲ್ಲಿ ಗ್ಯಾಸ್ ಎಷ್ಟು ಬಾಕಿ ಉಳಿದಿದೆ ಎಂಬುದನ್ನು ತಿಳಿಯಬಹುದು. ಇದಕ್ಕಾಗಿ ಮೊದಲು ನೀವು ಒದ್ದೆಯಾಗಿರುವ ಬಟ್ಟೆಯನ್ನು ಗ್ಯಾಸ್ ಸಿಲಿಂಡರ್ ಗೆ ಸುತ್ತಿ, ಒಂದು ನಿಮಿಷದವರೆಗೆ ಕಾಯಬೇಕು. ಸಮಯ ಪೂರ್ಣಗೊಂಡ ಬಳಿಕ ಬಟ್ಟೆಯನ್ನು ತೆಗೆಯಿರಿ ಹಾಗೂ ಸ್ವಲ್ಪ ಸಮಯ ಸಿಲಿಂಡರ್ ನಲ್ಲಾಗುವ ಬದಲಾವಣೆಗಳನ್ನು ಗಮನಿಸಿ. ಈಗ ಸಿಲಿಂಡರ್ ನ ಸ್ವಲ್ಪ ಭಾಗ ಒಣಗಿದ್ದು, ಸ್ವಲ್ಪ ಭಾಗ ಇನ್ನೂ ಒಣಗದೇ ಇರುವುದು ನಿಮ್ಮ ಗಮನಕ್ಕೆ ಬರಲಿದೆ. ಏಕೆಂದರೆ ಖಾಲಿಯಾಗಿರುವ ಸಿಲಿಂಡರ್ ಭಾಗ ಬಿಸಿಯಾಗಿರುವ ಕಾರಣ ಇದು ಸಂಭವಿಸುತ್ತದೆ. ಈ ಭಾಗ ನೀರನ್ನು ಬೇಗ ಹೀರಿಕೊಳ್ಳುತ್ತದೆ. ಸಿಲಿಂಡರ್ ನಲ್ಲಿ ಗ್ಯಾಸ್ ಇರುವ ಭಾಗ ತಂಪಾಗಿರುವ ಕಾರಣ ಅಲ್ಲಿ ನೀರು ಹಾಗೆಯೇ ಇರುತ್ತದೆ ಅಥವಾ ಅಲ್ಲಿ ನೀರು ಆರಲು ಸ್ವಲ್ಪ ಸಮಯ ಬೇಕಾಗುತ್ತದೆ

Vinkmag ad

Read Previous

ಹೊಸ ವಿದ್ಯುತ್ ಚಾಲಿತ ಸ್ಕೂಟರ್ ಪರಿಚಯಿಸಿದ ಹೀರೋ: ಬೆಲೆ ಎಷ್ಟು ಗೊತ್ತಾ?

Read Next

ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಇದ್ರೆ ಖಂಡಿತ ಈ ವಿಷಯ ನಿಮಗೆ ಗೊತ್ತಿರಲಿ

Leave a Reply

Your email address will not be published. Required fields are marked *

8 − two =

Most Popular