National News Analysis

27 July 2024, 10:03 AM

APL ಮತ್ತು BPL ಕಾರ್ಡ್ ಹೊಂದಿರುವವರಿಗೊಂದು ಮಹತ್ವದ ಮಾಹಿತಿ!

ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ APL ಮತ್ತು BPL ಕಾರ್ಡ್ ಹೊಂದಿದ್ದರೆ ಅವುಗಳನ್ನು ಜೂನ್ 30ರೊಳಗೆ ನಿಮ್ಮ ತಾಲೂಕು ದಂಡಾಧಿಕಾರಿಗಳಿಗೆ ಹಿಂದಿರುಗಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು : ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ APL ಮತ್ತು BPL ಕಾರ್ಡ್ ಹೊಂದಿದ್ದರೆ ಅವುಗಳನ್ನು ಜೂನ್ 30ರೊಳಗೆ ನಿಮ್ಮ ತಾಲೂಕು ದಂಡಾಧಿಕಾರಿಗಳಿಗೆ ಹಿಂದಿರುಗಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. 

ಯಾರಿಗೆ ಅವಶ್ಯಕತೆ ಇದೆ ಅವರುಗಳು ಕಾರ್ಡ್(Ration Card)​​ಗಳನ್ನು ಪಡೆಯಬಹುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳ ನೌಕರರು(Government Employees), ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು, ನಿಗಮಗಳು/ಸ್ವಾಯತ್ತ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು, ಆದಾಯ ತೆರಿಗೆ, ಸೇವಾತೆರಿಗೆ, ವ್ಯಾಟ್​​, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟರ್​ಗಿಂತಲೂ ಹೆಚ್ಚಿನ ಒಣ ಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವವರು APL ಮತ್ತು BPL ಕಾರ್ಡ್ ಹೊಂದಿದ್ದರೆ ಅವುಗಳನ್ನು ಜೂನ್ 30ರೊಳಗೆ ತಹಶೀಲ್ದಾರರಿಗೆ ಹಿಂದಿರುಗಿಸಬೇಕು. 

ನಗರ ಪ್ರದೇಶದಲ್ಲಿ ಸಾವಿರ ಅಡಿಗಳಿಗಿಂತಲೂ ಅಧಿಕವಾಗಿರುವ ವಿಸ್ತೀರ್ಣದ ಮನೆ ಹೊಂದಿರುವ ಕುಟುಂಬಗಳು, ಜೀವನ ಉಪಯೋಗಕ್ಕಾಗಿ ಸ್ವತ ಓಡಿಸುವ ಟ್ರ್ಯಾಕ್ಟರ್, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ ಹೊರತುಪಡಿಸಿ ಉಳಿದ ನಾಲ್ಕು ಚಕ್ರವಾಹನ ಹೊಂದಿರುವ ಕುಟುಂಬಗಳು, ವಾರ್ಷಿಕ ಕುಟುಂಬ ಆದಾಯ(Family Annual Income)ವು 1.20 ಲಕ್ಷಗಳಿಗಿಂತಲೂ ಅಧಿಕ ಇರುವ ಕುಟುಂಬಗಳು ಸರ್ಕಾರ ನಿಗದಿ ಪಡಿಸಿದ ಮಾನದಂಡಗಳ ಅನ್ವಯAPL ಮತ್ತು BPL ಕಾರ್ಡ್ ಹೊಂದಲು ಅನರ್ಹರಾಗಿರುತ್ತಾರೆ. ಒಂದು ವೇಳೆ ಹಿಂದಿರುಗಿಸದೆ ಇದ್ದರೆ, ದಂಡ ಕಟ್ಟಬೇಕಾಗುತ್ತದೆ. ಅಲ್ಲದೆ ನೌಕರಿ ಕಳೆದುಕೊಳ್ಳುವ ಸಂಭವ ಕೂಡ ಇದೆ ಎಂದು ಹೇಳಲಾಗುತ್ತಿದೆ.

IPL 2021: ಉಳಿದ ಪಂದ್ಯಗಳು UAE ನಲ್ಲಿಯೇ ನಡೆಯಲಿವೆ, ಮುದ್ರೆಯೋತ್ತಿದ BCCI

Vinkmag ad

Read Previous

BLR Airport Processes 650,225 kgs of COVID-19 Relief Material from April 1, 2021 to May 19, 2021   ·        Processed 542,620 kgs imports and 107,605 of domestic inbound COVID relief materials ·        The first 19 days of Maiy saw a surge in movement of relief material– 567,791 kgs (507,820 kgs of imports and 59,971 kgs of domestic inbound) ·        954 shipments, including over 25,891 pieces of COVID-19-related material were processed ·        Oxygen concentrators, ventilators and Zeolite were the top

Read Next

BSNL ನಿಂದ ಬಂಪರ್ ಆಫರ್ ಹೊಂದಿರುವ 499 ರೂ. ಹೊಸ ಪ್ಲಾನ್ ಬಿಡುಗಡೆ

Leave a Reply

Your email address will not be published. Required fields are marked *

18 − thirteen =

Most Popular